📢 *ಕೋಲಾರ ಹಾಲು ಒಕ್ಕೂಟದಿಂದ ರೈತ ಬಾಂಧವರಿಗೆ ಮಹತ್ವದ ಸೂಚನೆ! 🌾 * ಕೋಲಾರ ಹಾಲು ಒಕ್ಕೂಟದ (KOMUL) ವತಿಯಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತ ಮೇವಿನ ಜೋಳದ ಜೊತೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. * ✨ **ಉಚಿತವಾಗಿ ದೊರೆಯುವ ಮೇವಿನ ಜೋಳ: * ನೀರಾವರಿ ಹೊಂದಿರುವ ರೈತರಿಗೆ ಪ್ರತಿ 1 ಎಕರೆಗೆ ಕೆಳಗಿನ ಯಾವುದಾದರೂ ಒಂದು ತಳಿಯ ಜೋಳ ನೀಡಲಾಗುವುದು) 1) AT ಜೋಳ: 25ಕೆ.ಜಿ 2) SSG ಜೋಳ: 10 ಕೆ.ಜಿ 3) CSH ಹೈಬ್ರಿಡ್ ಜೋಳ: 5 ಕೆ.ಜಿ 💰 *ಪ್ರೋತ್ಸಾಹ ಧನ: ಮೇವು ಬೆಳೆದಿರುವ ರೈತರಿಗೆ ಪ್ರತಿ ಎಕರೆಗೆ ₹5,000/- ನೀಡಲಾಗುವುದು* . 📄 ಅಗತ್ಯ ದಾಖಲೆಗಳು (Documents Required): ಉಚಿತವಾಗಿ ಜೋಳವನ್ನು ಪಡೆಯಲು ರೈತರು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು: 1) ಆಧಾರ್ ಕಾರ್ಡ್ ಪ್ರತಿ 2) ಪಾಣಿ (RTC / ಪಹಣಿ) 3) ಬ್ಯಾಂಕ್ ಪಾಸ್‌ಬುಕ್ ಪ್ರತಿ ⚠️ *ಮುಖ್ಯ ನಿಬಂಧನೆ (Agreement): ದಾಖಲೆಗಳೊಂದಿಗೆ ರೈತರು ಒಪ್ಪಂದ ಪತ್ರಕ್ಕೆ (Agreement) ಸಹಿ ಮಾಡಬೇಕಿರುತ್ತದೆ. 1) ಮೊದಲನೇ ಪಾರ್ಟಿ:* ರೈತರ ಹೆಸರು 2) ಎರಡನೇ ಪಾರ್ಟಿ: MD KOMUL (ಮೇಲಿನ ಅಗತ್ಯ ದಾಖಲೆಗಳು ಹಾಗೂ ಒಪ್ಪಂದ ಪತ್ರವನ್ನು ನೀಡಿದ ನಂತರವೇ ಉಚಿತ ಬಿತ್ತನೆ ಬೀಜ ವಿತರಿಸಲಾಗುವುದು.) *ಇಂತಿ ಡಾ. ಮಹೇಶ್ ಆರ್ ಉಪ ವ್ಯವಸ್ಥಾಪಕರು ಕೋಲಾರ ಶಿಬಿರ ಕಚೇರಿ*